ಮನಸಿನ ಮಾತು ಆರ್. ಅನಂತ ರಾಜು ನಿರ್ದೇಶನದ ಮತ್ತು ಪ್ರವೀಣ್ ಕುಮಾರ್ ನಿರ್ಮಿಸಿದ 2011 ರ ಭಾರತೀಯ ಕನ್ನಡ ಚಲನಚಿತ್ರವಾಗಿದೆ . ಈ ಚಿತ್ರದಲ್ಲಿ ಅಜಯ್ ರಾವ್ ಮತ್ತು ಐಂದ್ರಿತಾ ರೇ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರವು ತಮಿಳಿನ ರೋಜಾ ಕೂಟಂ (2002) ಎಂಬ ಚಿತ್ರದ ರಿಮೇಕ್ ಆಗಿದೆ. ಎ ಎಂ ನೀಲ್ ಅವರು ಸಂಗೀತ ಸಂಯೋಜಿಸಿದ್ದು, ಎಂ ಆರ್ ಸೀನು ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರವು 28 ಜನವರಿ 2011 ರಂದು ವಿಮರ್ಶಕರಿಂದ ಋಣಾತ್ಮಕ ವಿಮರ್ಶೆಗಳೊಂದಿಗೆ ಬಿಡುಗಡೆಯಾಯಿತು. == ಕಥಾವಸ್ತು == ಚಿತ್ರವು ಕೌಟುಂಬಿಕ ಮನರಂಜನೆಯ ರೋಮ್ಯಾಂಟಿಕ್ ಕಥೆಯನ್ನು ಹೊಂದಿದೆ. == ಪಾತ್ರವರ್ಗ == ಅಜಯ್ ಪಾತ್ರದಲ್ಲಿ ಅಜಯ್ ರಾವ್ ಸಹನಾ ಪಾತ್ರದಲ್ಲಿ ಐಂದ್ರಿತಾ ರೇ ಕೃಷ್ಣನಾಗಿ ಲೋಹಿತ್ ತಾರಾ ಅವಿನಾಶ್ ಶರಣ್ ಶರತ್ ಲೋಹಿತಾಶ್ವ ಸಾಧು ಕೋಕಿಲ ಉಮಾಶ್ರೀ ಪದ್ಮಾ ವಾಸಂತಿ ಸತ್ಯಜಿತ್ == ಧ್ವನಿಮುದ್ರಿಕೆ == == ಉಲ್ಲೇಖಗಳು ==